Index   ವಚನ - 278    Search  
 
ಸ್ವಯಂ ಜ್ಯೋತಿರ್ಲಿಂಗ ಸಂಗದಿಂದ ಆತ್ಮನು ಜ್ಯೋತಿರ್ಲಿಂಗ ಸ್ವರೂಪವಾದನು. ಮನವು ಜ್ಯೋತಿರ್ಲಿಂಗ ಸಂಗದಿಂದ ಜ್ಯೋತಿ ಸ್ವರೂಪವಾಗಿ ಶಿವನ ನೆನವುತ್ತಿಹುದು. ಜ್ಯೋತಿರ್ಲಿಂಗ ಸಂಗದಿಂದ ಚಕ್ಷು ಜ್ಯೋತಿ ಸ್ವರೂಪವಾಗಿ ಶಿವಲಿಂಗವೆ ಕಾಣುತ್ತಿಹುದು. ಇಂದ್ರಿಯಂಗಳು ಜ್ಯೋತಿರ್ಲಿಂಗ ಸಂಗದಿಂದ ಜ್ಯೋತಿ ಸ್ವರೂಪವಾಗಿ ಲಿಂಗದೊಡನೆ ವರ್ತಿಸುತ್ತಿಹವು. ಶರಣನೊಳಹೊರಗೊಡಗೂಡಿ ತೋರುವ ಜ್ಯೋತಿರ್ಲಿಂಗ ಸ್ವರೂಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.