Index   ವಚನ - 308    Search  
 
ಗುರುವ ತಲೆಯಲಿ ಹೊತ್ತು ನಡೆವ ಶಿಷ್ಯನಲ್ಲಿ ಗುರುವಡಗಿ ಶಿಷ್ಯ ಗುರುವಾದ ಪರಿಯ ಬಲ್ಲವರಾರಯ್ಯ? ಗುರುವಿನ ಗುರುತ್ವ ಶಿಷ್ಯಂಗಾಯಿತ್ತು, ಶಿಷ್ಯನ ಶಿಷ್ಯತ್ವ ಎಲ್ಲಿ ಹೋಯಿತ್ತೆಂದರಿಯಬಾರದು. ಗುರುವಿಲ್ಲದ ಶಿಷ್ಯಂಗೆ ಪರವಿಲ್ಲ. ಪರವಿಲ್ಲದ ಶಿಷ್ಯ ಸ್ವಯಂವಾಗನೆಂಬುದ ನಿಮ್ಮ ಶರಣರ ಅನುಭಾವದಲ್ಲಿ ಕಂಡೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.