Index   ವಚನ - 309    Search  
 
ಗುರು ಶಿಷ್ಯನ ಕೊಂದು ಶಿಷ್ಯನಾದನು. ಶಿಷ್ಯ ಹೋಗಿ ಮರಳಿ ಗುರುವ ಕೊಂದು ಗುರುವಾದನು. ಗುರು ಶಿಷ್ಯರೊಬ್ಬರನೊಬ್ಬರು ಕೊಂದು ಇಬ್ಬರೂ ಸತ್ತರು. ಇವರಿಬ್ಬರೂ ಸತ್ತ ಠಾವದೊಬ್ಬರಿಗೂ ಕಾಣಬಾರದು, ಸತ್ತ ಸಾವ ಕಂಡೆಹೆನೆಂದು ಉಟ್ಟುದನಳಿದು ಬತ್ತಲೆ ಹೋಗಿ ತಲೆವಾಗಿಲ ತೆಗೆದು ನೋಡಲು ಇವರಿಬ್ಬರೂ ಒಬ್ಬನೊಳಗಳಿದು ಒಬ್ಬನೈದಾನೆ. ಇಂತಿವರಿಬ್ಬರೂ ಸತ್ತ ಸಾವನಾರಿಗೂ ಅರಿಯಬಾರದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಕರುಣವುಳ್ಳವರಿಗಲ್ಲದೆ.