Index   ವಚನ - 311    Search  
 
ಶಿವಯೋಗಿ ಸುಳಿದ ಸುಳುಹು ಜಗತ್ಪಾವನ. ಮೆಟ್ಟಿದ ಧರೆಯೆಲ್ಲ ಪವಿತ್ರ. ನಿಮಿಷವಿರ್ದಾಸ್ಥಲವೆಲ್ಲ ಅವಿಮುಕ್ತಿಕ್ಷೇತ್ರ. ಹೊಕ್ಕ ಜಲವೆಲ್ಲ ಪುಣ್ಯತೀರ್ಥಂಗಳು. ಏರಿದ ಬೆಟ್ಟವೆಲ್ಲ ಶ್ರೀ ಪರ್ವತ. ಕೃಪೆಯಿಂದ ನೋಡಿದ ಜನರೆಲ್ಲ ಸಾಲೋಕ್ಯರು. ಒಡನೆ ಸಂಭಾಷಣೆಯ ಮಾಡಿದವರೆಲ್ಲ ಸದ್ಯೋನ್ಮುಕ್ತರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಸುಳುಹಿನ ಘನತೆಯನುಪಮಿಸಬಾರದು.