ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ ಕಾಯವಿಲ್ಲ,
ಕಾಯವಿಲ್ಲಾಗಿ ಕರ್ಮವಿಲ್ಲ.
ಅದೆಂತೆಂದಡೆ:
ಕಾರ್ಯವಿಲ್ಲದ ಕುಲಾಲಚಕ್ರಭ್ರಮಣದಂತೆ,
ದೇಹವಿಡಿದು ಚರಿಸಿದನೆಂದಡೆ ದೇಹಿಯೆನಬಹುದೇ ಶರಣನ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಲವು ತಾನೆ ಬೇರಿಲ್ಲಾ.
Art
Manuscript
Music
Courtesy:
Transliteration
Liṅgadalli līyavāda paramānanda svarūpaṅge kāyavilla,
kāyavillāgi karmavilla.
Adentendaḍe:
Kāryavillada kulālacakrabhramaṇadante,
dēhaviḍidu carisidanendaḍe dēhiyenabahudē śaraṇana?
Nijaguru svatantrasid'dhaliṅgēśvarana
nilavu tāne bērillā.