Index   ವಚನ - 320    Search  
 
ಮೃತ್ ಕಾಷ್ಠ ಪಾಷಾಣಂಗಳಿಂದಲಾದವೆಲ್ಲ ಲಿಂಗವೇ? ಲೋಹ ಬೆಳ್ಳಿ ತಾಮ್ರ ಸುವರ್ಣದಿಂದಲಾದವೆಲ್ಲ ಲಿಂಗವೇ? ಅಲ್ಲಲ್ಲ. ಅಲ್ಲಿ ಭಾವಿಸುವ ಮನದ ಕೊನೆಯ ಮೊನೆಯಮೇಲೆ ಬೆಳಗುವ ನಿಜ ಬೋಧಾರೂಪು ಲಿಂಗವಲ್ಲದೆ, ಇವೆಲ್ಲ ಲಿಂಗವೇ? ತಿಳಿದು ನೋಡಲು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ ಲಿಂಗವು.