Index   ವಚನ - 321    Search  
 
ಜ್ಞಾನಾನಂದ ಪರಬ್ರಹ್ಮವೆ ಲಿಂಗವೆಂದು ಅರಿದ ಅರಿವು ತಾನೇ ತನ್ನಲ್ಲಿ ವಿಶ್ರಮಿಸಿ, ತೆರಹಿಲ್ಲದೆ ಅವಿರಳ ಸಂಬಂಧವಾದ ಲಿಂಗವ ಭಾವಿಸಲುಂಟೆ? ಅರಿಯಲುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿತ್ಯ ನಿರಾಳದ ಕುರುಹಿಡಿಯಲುಂಟೆ ಹೇಳಾ?