Index   ವಚನ - 327    Search  
 
ಆನೆಯು ಕೋಣನೂ ಕೂಡಿ ಅಡವಿಯಲ್ಲಿ ಆಡುತ್ತಿರಲು ಕೇಸರಿ ಬಂದು ಬೆದರಿಸಿತ್ತು. ಕೇಸರಿಯ ಕಂಡು ಆನೆ ಅಳಿಯಿತ್ತು. ಕೋಣ ಕೇಸರಿಯ ನುಂಗಿ ಕೇಸರಿಯಾಯಿತ್ತು. ಉಡು ಸರ್ಪನ ಹಿಡಿದು ನುಂಗಲು ಉಡುವಿಂಗೆ ಹೆಡೆಯಾಯಿತ್ತು. ಆ ಉಡುವಿನ ಹೆಡೆಯ ಮಾಣಿಕವ ಕಂಡು ಅಡಗಿದ್ದ ಹದ್ದು ಹಾಯ್ದು ಆಕಾಶಕ್ಕೊಯ್ಯಿತ್ತು. ಆ ಆಕಾಶದಲ್ಲಿ ಮಾಣಿಕದ ಬೆಳಗು ತುಂಬಲು ಆ ಬೆಳಗ ಕಂಡು ಹಿರಿದೊಂದು ನರಿ ಕೂಗಿತ್ತು. ಆ ಮಾಣಿಕ ನರಿಯ ನುಂಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿರವಯಲಾಯಿತ್ತು.