ಉರಗನ ಫಣಾಮಣಿಯ ಬೆಳಗನರಿ ಕಂಡ.
ಉರವಣಿಸಿ ಮೇಲಕ್ಕೆ ಹಾರುವ ಹದ್ದಿನ ಹಾರವನರಿ ಕಂಡ.
ಸರಸ್ವತಿ ಸಿರಿಯೊಡನೇಕಾಂತದಲ್ಲಿಹ ಪರಿಯನರಿ ಕಂಡ.
ಹರಿಯಜರುದ್ರರ ಕರ್ಮವನಳಿದ ಪರಿಯನರಿ ಕಂಡ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ತಾನೆಂದರಿ ಕಂಡಾ.
Art
Manuscript
Music
Courtesy:
Transliteration
Uragana phaṇāmaṇiya beḷaganari kaṇḍa.
Uravaṇisi mēlakke hāruva haddina hāravanari kaṇḍa.
Sarasvati siriyoḍanēkāntadalliha pariyanari kaṇḍa.
Hariyajarudrara karmavanaḷida pariyanari kaṇḍa.
Nijaguru svatantrasid'dhaliṅgēśvara, tānendari kaṇḍā.