Index   ವಚನ - 337    Search  
 
ಅಶನಕ್ಕಾಗಿ ವಸನಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ ನೆರೆದ ಪರಿಯ ನೋಡಾ. ಒಬ್ಬರ ನುಡಿ ಒಬ್ಬರಿಗೆ ಸೊಗಸದ ಕಾರಣ ಮಥನಕರ್ಕಶದಲ್ಲಿರ್ಪ ಪರಿಯ ನೋಡಾ. ಅಯ್ಯಾ ಜೀಯಾ ದೇವರು ಎಂಬರು ಮತ್ತೊಂದು ಮಾತ ಸೈರಿಸದೆ. ಎಲವೊ ಎಲವೊ ಎಂದು ಕುಲವೆತ್ತಿ ನುಡಿವರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀ ಮಾಡಿದ ಮಾಯದ ಬಿನ್ನಾಣದ ಮರೆಯಲ್ಲಿದ್ದವರ ಕಂಡು ನಾ ಬೆರಗಾದೆನು.