Index   ವಚನ - 352    Search  
 
ಆಡಿನ ಕೋಡಗದ ಕೂಟದ ಸಂಚದ ಕೀಲ ಕಳೆದು ಆಡಿನ ಕೋಡ ಮುರಿದಡೆ ಕೋಡಗ ಕೊಂಬನೇರಿತ್ತು. ಆ ಕೊಂಬಿನ ಕೋಡಗದ ಕೈಯಲ್ಲಿ ಮಾಣಿಕವ ಕೊಟ್ಟರೆ ಮಾಣಿಕ ಕೋಡಗವ ನುಂಗಿತ್ತು. ಬಳಿಕ ಆಡು ಮಾಣಿಕವ ನುಂಗಿ, ತಾನೊಂದೆಯಾಯಿತ್ತು. ಈ ಪರಿ ಆಡು ಕೋಡಗದ ಸಂಗವ ಹಿಂಗಿಸಿ, ನಿಜವ ಕೂಡಬಲ್ಲಾತನೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜಯೋಗಿ.