ಕಮಲನಾಳದ ಸೂತ್ರ ಸಮವಾಗಿ ನಿಂದಲ್ಲಿ
ಒಂದಾಶ್ಚರ್ಯದ ರೂಪದೆ.
ಅದ ನೋಡಿ ಘನವ ಕೂಡುವ ಪರಿಯೆಂತೋ?
ಅದ ಕೂಡಿಹೆನೆಂದಡೆ, ತಾನಿಲ್ಲದೆ ಕೂಡಬೇಕು
ಕೂಡದ ಕೂಟವನುಸುರಲೆಡದೆರಹುಂಟೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ[ದ]
ಬಳಿಕ ತಾನು ತಾನಾಗಿರಬೇಕು.
Art
Manuscript
Music
Courtesy:
Transliteration
Kamalanāḷada sūtra samavāgi nindalli
ondāścaryada rūpade.
Ada nōḍi ghanava kūḍuva pariyentō?
Ada kūḍ'̔ihenendaḍe, tānillade kūḍabēku
kūḍada kūṭavanusuraleḍaderahuṇṭe?
Nijaguru svatantrasid'dhaliṅgēśvarana kūḍi[da]
baḷika tānu tānāgirabēku.