ಮೇಘ ಮರೆಯಾಗಿ ಚಂದ್ರನಿದ್ದನೆಂದಡೆ
ಆ ಚಂದ್ರಂಗೆ ಕಳೆ ಕುಂದುವುದೇ ಅಯ್ಯ?
ದೇಹದ ಮರೆವಿಡಿದು ಶರಣನಿದ್ದನೆಂದಡೆ
ಆತನ ಮಹಿಮಾಗುಣ ಕೆಡುವುದೇ ಅಯ್ಯ?
ಗಿಡದ ಮೇಲಣ ಪಕ್ಷಿಯಂತೆ, ಪದ್ಮಪತ್ರದ ಜಲದಂತೆ,
ದೇಹಸಂಗದಲ್ಲಿದ್ದೂ ಇಲ್ಲದಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ
ಇರವಿನ ಪರಿ ಇಂತುಟು.
Art
Manuscript
Music
Courtesy:
Transliteration
Mēgha mareyāgi candraniddanendaḍe
ā candraṅge kaḷe kunduvudē ayya?
Dēhada mareviḍidu śaraṇaniddanendaḍe
ātana mahimāguṇa keḍuvudē ayya?
Giḍada mēlaṇa pakṣiyante, padmapatrada jaladante,
dēhasaṅgadalliddū illadihanu,
nijaguru svatantrasid'dhaliṅgēśvarana śaraṇa
iravina pari intuṭu.