Index   ವಚನ - 356    Search  
 
ಬ್ರಹ್ಮನಾಳಾಗ್ರಹದ ಸಹಸ್ರದಳಕಮಲ ಕರ್ಣಿಕಾಮಧ್ಯದೊಳು, ದ್ಯುಮಣಿ ಶಶಿ ಶಿಖಿಕೋಟಿ ಬೆಳಗ ಮೀರಿ ತೋರುವ ಪರಂಜ್ಯೋತಿಯನು, ಸುಮನ ಸುಜ್ಞಾನ ಸದ್ಭಾವನೆಗಳಿಂದ ನೆನೆನೆನೆದು, ಅರಿದರಿದು ಭಾವಿಸಿ ಭಾವಿಸಿ, ಶಿವಸುಖಾನಂದದೊಳಗೋಲಾಡುತ್ತ, ಶಿವಸುಖ ಸಹಸ್ರಮಡಿಯಾಗಿ ಮುಸುಕಿ, ತಾನಲ್ಲದೆ ನಾನೆಂಬುದಕ್ಕೆ ತೆರಹುಗೊಡದೆ ನಿಂದಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ತಾನು ತಾನಾದ ಶರಣನ ಏನ ಹೇಳಬಹುದು?