ಸತ್ ಚಿತ್ ಆನಂದ ನಿತ್ಯಪರಿಪೂರ್ಣ
ಪರಂಜ್ಯೋತಿಯೊಡಗೂಡಿ ಅರಿದಿರ್ದಾತಂಗೆ,
ಸರ್ವ ವಿಷಯಜ್ಞಾನವಿಲ್ಲ, ದೇವತಿರ್ಯಙ್ಮನುಷ್ಯಾದಿ
ವ್ಯವಹಾರ ವಿಕಲ್ಪವಿಲ್ಲ,
ಮಾಯಾಭ್ರಾಂತಿ ಲಯವಾಯಿತ್ತಾಗಿ.
ಸುಜ್ಞಾನ ಸುಷುಪ್ತಿಯನೆಯ್ದಿ ಶಿವ ತಾನಾದ ಅವಿರಳ ಪ್ರಸಾದಿಗೆ
ಇಹಪರವೆಂಬುದಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು.
Art
Manuscript
Music
Courtesy:
Transliteration
Sat cit ānanda nityaparipūrṇa
paran̄jyōtiyoḍagūḍi aridirdātaṅge,
sarva viṣayajñānavilla, dēvatiryaṅmanuṣyādi
vyavahāra vikalpavilla,
māyābhrānti layavāyittāgi.
Sujñāna suṣuptiyaneydi śiva tānāda aviraḷa prasādige
ihaparavembudilla,
nijaguru svatantrasid'dhaliṅgēśvaranē tānāgihanu.