Index   ವಚನ - 363    Search  
 
ಅರಿವಿನಿಂದ ಅರಿದೆನೆಂಬ ಶಿಷ್ಯನಿಲ್ಲ, ಅರುಹಿಸುವ ಗುರು ಮುನ್ನಿಲ್ಲ. ಅರಿವುದಿನ್ನೇನ, ಅರುಹಿಸುವುದಿನ್ನೇನ ಹೇಳ? ಶ್ರೀಗುರುವಿನ ಪ್ರಸನ್ನ ಪಾದೋದಕದಲ್ಲಿ ಮುಳುಗಿ, ಸಮರಸ ಸಂಬಂಧವಾದ ಬಳಿಕ, ಇನ್ನು ಭೇದಭಾವವುಂಟೇ ಹೇಳಾ? ಸೀಮೆಯಳಿದ ನಿಸ್ಸೀಮಂಗೆ ಕಾಯವಿಲ್ಲ. ಕಾಯವಿಲ್ಲವಾಗಿ ಮಾಯವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಬಲ್ಲಾ.