Index   ವಚನ - 365    Search  
 
ಶರಣನ ಸರ್ವಾಂಗವು ಲಿಂಗದಂಗವು. ಶರಣ ನಡೆವ ಗತಿ ಲಿಂಗದ ಗತಿ. ಶರಣ ನುಡಿದ ನುಡಿ ಲಿಂಗದ ನುಡಿ. ಶರಣನಿದ್ದ ಸ್ವಭಾವದಿರವೆ ಲಿಂಗದಿರವು. ಶರಣನಲ್ಲಿ ತೋರುವ ಜಾಗೃತ್ ಸ್ವಪ್ನಂಗಳೆಲ್ಲ ಲಿಂಗವಿಡಿದು ತೋರುವುವು. ಇದು ಕಾರಣ, ಜ್ಞಾನಿಯಲ್ಲಿ ತೋರುವ ಕ್ರಿಯೆಗಳು ಫಲದಾಯಕ ಕ್ರಿಯೆಗಳಲ್ಲ. ಅದೆಂತೆಂದಡೆ, ಘೃತ ಸೋಂಕಿದ ರಸನೆಗೆ ಘೃತ ಲೇಪವಿಲ್ಲದಂತೆ, ಶರಣಂಗೆ ಕರ್ಮಲೇಪವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಸ್ವತಂತ್ರ.