Index   ವಚನ - 379    Search  
 
ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ, ತುರ್ಯ ತುರ್ಯಾತೀತ ಸಹಜಾವಸ್ಥೆ ಎಂಬ ಮೂರು ಕೂಡಿ ಯೋಗಿಸುವ ಯೋಗಿಗೆ, ಸಾಲಂಬ ನಿರಾಲಂಬದೊಳಗೆ ಅಡಗಿ ಆ ನಿರಾಲಂಬದ ನಿಶ್ಚಿಂತ ನಿವಾಸದಲ್ಲಿ ಆತ್ಮ ಪರಮಾತ್ಮರೊಂದಾದ ಬಳಿಕ ಅನಂತ ಸಚರಾಚರ ಒಂದು ಕಿಂಚಿತ್ತು. ಚತುರ್ಮುಖ ಇಂದ್ರ ವಿಷ್ಣುವೆಂಬವರ ಪದ ಒಂದು ಕಿಂಚಿತ್ತು. ಇನ್ನುಳಿದವರ ಹೇಳಲಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ ಹಿರಿದೊಂದಿಲ್ಲ.