Index   ವಚನ - 380    Search  
 
ಜ್ಞಾತೃ ಜ್ಞಾನ ಜ್ಞೇಯ ಮೂರೊಂದಾದುದೇ ಜೀವ ಪರಮರೈಕ್ಯವಯ್ಯ. ಆ ಜೀವ ಪರಮರೈಕ್ಯವಾದುದೆ ಮನ ಲೀಯ. ಮನ ಲೀಯವಾದ ಬಳಿಕ ಇನ್ನು ಧ್ಯಾನಿಸಲುಂಟೆ? ಅರಿಯಲುಂಟೆ ಹೇಳ? ಬಾಹ್ಯಾಭ್ಯಂತರ ಇಂದ್ರಿಯದ ಮನದ ವಿಕಾರವಳಿದು ಅವಿದ್ಯಾವಾಸನೆಯಡಗಿ, ಅಹಂಕಾರ ಉಡುಗಿದ ಜೀವನ್ಮುಕ್ತಂಗೆ ಸರ್ವಶೂನ್ಯವಾಗಿ, ಸಮುದ್ರಮಧ್ಯದ ತುಂಬಿದಕೊಡದಂತೆ ಇದ್ದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣನು.