ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು
ತೋರದಾಗಿ, ಅದೇನು ಕಾರಣವೆಂದಡೆ:
ಆತನ ಮನ ಲಿಂಗದಲ್ಲಿ ಲೀಯವಾದ ಕಾರಣ.
ಸೂರ್ಯಂಗೆ ಶೀತರುಚಿಗಳು ತೋರಿದರೂ,
ಚಂದ್ರನಿಗೆ ಉಷ್ಣರುಚಿಗಳು ತೋರಿದರೂ,
ಅಗ್ನಿ ತಲೆಕೆಳಕಾಗಿ ಉರಿದಡೆಯೂ,
ತೋರುವ ನಾನಾ ಆಶ್ಚರ್ಯಂಗಳೆಲ್ಲ
ಮಾಯಾವಿಲಾಸವೆಂದರಿದ ಶರಣಂಗೆ
ಒಂದಾಶ್ಚರ್ಯವೂ ತೋರದಾಗಿ
ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಅರಿವಿನೊಳಗಡಗಿದನು.
Art
Manuscript
Music
Courtesy:
Transliteration
Śivajñānasampannanāda śaraṇaṅge hiridondāścaryavu
tōradāgi, adēnu kāraṇavendaḍe:
Ātana mana liṅgadalli līyavāda kāraṇa.
Sūryaṅge śītarucigaḷu tōridarū,
candranige uṣṇarucigaḷu tōridarū,
agni talekeḷakāgi uridaḍeyū,
tōruva nānā āścaryaṅgaḷella
māyāvilāsavendarida śaraṇaṅge
ondāścaryavū tōradāgi
āta, nijaguru svatantrasid'dhaliṅgēśvarana
arivinoḷagaḍagidanu.