Index   ವಚನ - 11    Search  
 
ಬಳಿಕಮಾ ಲಿಂಗಸ್ಥಲತ್ರಯದಲ್ಲಿ ಇಷ್ಟಲಿಂಗಮೆ ಆಚಾರಲಿಂಗ ಗುರುಲಿಂಗಮೆಂದುಭಯಂ. ಪ್ರಾಣಲಿಂಗಮೆ ಶಿವಲಿಂಗ ಜಂಗಮಲಿಂಗಮೆಂದುಭಯಂ. ಭಾವಲಿಂಗಮೆ ಪ್ರಸಾದಲಿಂಗ ಮಹಾಲಿಂಗಮೆಂದುಭಯಮಿವಂ ಗಣಿಸಲರುವೆಸರಲಿಂಗಮಾಗಲದು ನೀನೆಯಯ್ಯ, ನಿಗಮಾಂತ ಭಾಸ್ವರ ನೀಲರುಚಿ ಕಂಧರ ಪರಮಶಿವಲಿಂಗೇಶ್ವರಾ.