Index   ವಚನ - 12    Search  
 
ಮತ್ತಂ, ಮೊದಲಂಗ ಷಟ್ಸ್ಥಲದಲ್ಲಿ ಭಕ್ತಸ್ಥಲಮೊಂದೆ ಪಿಂಡ ಪಿಂಡಜ್ಞಾನ ಸಂಸಾರಹೇಯ ಗುರುಕರುಣ ಲಿಂಗಧಾರಣ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಭಕ್ತೋಭಯ ತ್ರಿವಿಧಸಂಪಚ್ಚತುರ್ವಿಧಸಾರಸೋಪಾಧಿ ನಿರುಪಾಧಿ ಸಹಜದಾನಂಗಳೆಂದು ಪದಿನೈದು ತೆರನಲ್ಲಿ ನೀನೆ ಆಚಾರಲಿಂಗಮಾಗಿ ನೆಲಸಿರ್ಪೆಯಯ್ಯ, ಚಿದ್ಗಗನಚಂದ್ರ ಚಿರಂತನ ಪ್ರಮಥೇಂದ್ರ ಚಿತ್ತಜಗಜ ಮೃಗೇಂದ್ರ ಚಿರಾಯುರ್ದಾಯಿ ಪರಮ ಶಿವಲಿಂಗೇಂದ್ರಾ.