Index   ವಚನ - 61    Search  
 
ಬಳಿಕ್ಕಮಾ ಬಾಹ್ಯದ ಸೂರ್ಯಮಂಡಲದ ಬಹಿರ್ವಳಯದಲ್ಲಿ ಮೊದಲ ವರ್ಣದಿಂ ತರವಿಡಿದೆರಳ್ಪದಿನಾರಕ್ಕೆ ಮೂವತ್ತೆರಡೆಸಳ್ಗಳಂ ಬರೆದದರ ಮುಂದಣ ಚಂದ್ರಮಂಡಲದಲ್ಲಿ ಮೊದಲ ಮಂಡಲದೊಳೊಂ[ದೊಂ]ದು ಪಾಲಾದೊಳ್ದಳೋಪದಳಂ- ಗಳಾದ ಪದಿನಾರೆಸಳ್ಗಳಂ ಬರೆದಂತೆಯೆ ಅಗ್ನಿಮಂಡಲದೊಳೆಂಟೆಸಳ್ಗಳಂ ಲಿಖಿಸುತ್ತಂತೆಯೆ ಸೂಕ್ಷ್ಮ ಕರ್ಣಿಕೆಯಂ ಬಳಸಿ ಚೌದಳದ ನ್ಯಾಸಮಂ ತಿಳಿಯೆಂದೆಯಯ್ಯಾ, ಪರಮಶಿವಲಿಂಗ ಪ್ರಕಟಿತ ಸುಜ್ಞಾನಪ್ರಸಂಗ.