Index   ವಚನ - 62    Search  
 
ಮೇಣ್ಚಕ್ರನ್ಯಾಸದ ತರುವಾಯ ದೇವತಾನ್ಯಾಸವೆಂತೆನೆ, ಕರ್ಣಿಕಾಮಧ್ಯದಲ್ಲಿ ಸರ್ವಾಧಾರೆಯಾದ ಪರಾಶಕ್ತಿಯಂ, ತತ್ಕರ್ಣಿಕೆಯಂ ಬಳಸಿದ ಚೌದಳಂಗಳಲ್ಲಿ ಪ್ರದಕ್ಷಿಣಮಾಗಿ ಯಂಬಿಕೆ ಗಣಾನಿ ಈಶ್ವರಿ ಮನೋನ್ಮನಿಯರೆಂಬ ಚತುಶ್ಯಕ್ತಿಯರಂ ಭಜಿಸೆಂದುಸಿರ್ದೆಯಯ್ಯಾ, ಪರಮಶಿವಲಿಂಗ ಪಾಶೋತ್ಕರ ವಿಭಂಗ.