ದೇವತಾನ್ಯಾಸಾನಂತರದಲ್ಲಿ ಮಂತ್ರನ್ಯಾಸಮಂ ಪೇಳ್ವೆನೆಂತೆನೆ
ಈ ಚಕ್ರದ ಕರ್ನಿಕಾವೃತ್ತದ ಚೌದಳದ ನಡುವೆ
ಶಿವಬೀಜವಾದ ಹಕಾರವನಂಕಿಪುದು.
ಮೂಡಣೆಸಳಲ್ಲಿ ಬಿಂದು ಸಂಜ್ಞಿತವಾದ ಸಕಾರವಂ ಲಿಖಿಪು
ದಾತ್ಮಬೀಜವಾದಕಾರಮಂ ತೆಂಕಣೆಸಳಲ್ಲಿ ಬರೆವುದು.
ಪಡುವಣೆಸಳಲ್ಲಿ ಸೂಕ್ಷ್ಮನಾದವೆನಿಸಿದೈಕಾರವನುದ್ಧರಿಪುದು.
ಬಡಗಣೆಸಳಲ್ಲಿ ವಿದ್ಯಾಬೀಜವಾದ ಕ್ಷಕಾರವನಿರಿಸುವದಿಂತು
ಕರ್ಣಿಕಾಪೂರ್ವದಕ್ಷಿಣಪಶ್ಚಿಮೋತ್ತರಂಗಳೆಂಬಿವೈದರಲ್ಲಿ
ಹ ಸ ಅ ಐ ಕ್ಷ ಎಂಬೈದಕ್ಕರಂಗಳಂ
ಭಾವಿಪುದೆಂದೆಯಯ್ಯಾ,
ಪರಮಗುರು ಪರಮ ಶಿವಲಿಂಗೇಶ್ವರ.
Art
Manuscript
Music Courtesy:
Video
TransliterationDēvatān'yāsānantaradalli mantran'yāsamaṁ pēḷvenentene
ī cakrada karnikāvr̥ttada caudaḷada naḍuve
śivabījavāda hakāravanaṅkipudu.
Mūḍaṇesaḷalli bindu san̄jñitavāda sakāravaṁ likhipu
dātmabījavādakāramaṁ teṅkaṇesaḷalli barevudu.
Paḍuvaṇesaḷalli sūkṣmanādavenisidaikāravanud'dharipudu.
Baḍagaṇesaḷalli vidyābījavāda kṣakāravanirisuvadintu
karṇikāpūrvadakṣiṇapaścimōttaraṅgaḷembivaidaralli
ha sa a ai kṣa embaidakkaraṅgaḷaṁ
bhāvipudendeyayyā,
paramaguru parama śivaliṅgēśvara.