Index   ವಚನ - 82    Search  
 
ಇಂತು ಕರ್ಣಿಕಾಗ್ನಿಂದು ಸೂರ್ಯಮಂಡಲದಳಸ್ಥಂಗಳಾದಕ್ಷರಂಗಳ ಗಣನೆಯೈವತ್ತೊಂದಾಯಿತ್ತು. ಮತ್ತವಿೂ ಚಕ್ರಕರ್ಣಿಕಾದಿ ಮಂಡಲತ್ರಯಾನ್ವಿತ ವಾಚಕರೂಪ ಹಕಾರಾದಿ ವರ್ಣ ವಾಚ್ಯ ನಿರೂಪಣಾನಂತರದಲ್ಲಿ, ಕಡೆಯ ಸೂರ್ಯಮಂಡಲದುಪದಳಂಗಳಂ ಬಿಟ್ಟುಳಿದ ಪರಶಿವಾದ್ಯಧಿದೇವತೆಗಳಂ ತಿಳಿದು ಭಾವಿಸಿ ಪೂಜಿಪುದೆಂದೆಯಯ್ಯಾ, ಪರಮ ಮಹಿಮ ಪರಶಿವಲಿಂಗೇಶ್ವರ.