ಮೇಣಾ ಮಂತ್ರಮೂರ್ತಿಗೆ ನಾದವೆ ಕಿರೀಟಮದೆಂತೆನೆ
ಯಾ ಪರಶಿವನ ನಿಷ್ಕಳಶಕ್ತಿಯದೆ ನಾದವದೆಯಾದಿಶಕ್ತಿಯದೆ
ಓಂಕಾರವದರುತ್ಪತ್ತಿಯೆಂತೆನೆ
ಅಕಾರವೆ ನಾದ ಉಕಾರವೆ ಬಿಂದುವುಭಯಂಗೂಡಿ
ಅವು `ಓ ಭವತಿ'ಯೆಂದೊಂದೆಯಾಗಿ ಓ ಎನಿಸಿತ್ತದರಂತೆ
ಆ ಓ ಕೂಡಿ ಔಯೆನಿಸಿತ್ತು
ಹಾಂಗೆಯೆ ಆ ಇ ಕೂಡಿ ಎ ಎನಿಸಿತ್ತದರಂತೆ
ಅ ಏ ಕೂಡಿ ಐ ಏ ಓ ಔ ಯೆಂಬೀ
ಚತುರಕ್ಷರಂಗಳ್ರೂಪಾಂತರದಿಂ
ಸಂಧ್ಯಕ್ಷರಂಗಳೆನಿಸುಗುಮವರೋಳ್
ಓಕಾರವೆ ಆದಿಶಕ್ತಿಯ ಧ್ವಜಾಕಾರ ರೇಖೆಗಳೆ,
ಈ ಮೂಲಪ್ರಸಾದ ಮಂತ್ರಮೂರ್ತಿಯ ಕಿರೀಟವೆಂದು ನಿರವಿಸಿದೆಯಯ್ಯಾ,ಪರಶಿವಲಿಂಗೇಶ್ವರ.
Art
Manuscript
Music Courtesy:
Video
TransliterationMēṇā mantramūrtige nādave kirīṭamadentene
yā paraśivana niṣkaḷaśaktiyade nādavadeyādiśaktiyade
ōṅkāravadarutpattiyentene
akārave nāda ukārave binduvubhayaṅgūḍi
avu `ō bhavati'yendondeyāgi ō enisittadarante
ā ō kūḍi auyenisittu
hāṅgeye ā i kūḍi e enisittadarante
a ē kūḍi ai ē ō au yembī
caturakṣaraṅgaḷrūpāntaradiṁ
sandhyakṣaraṅgaḷenisugumavarōḷ
ōkārave ādiśaktiya dhvajākāra rēkhegaḷe,
ī mūlaprasāda mantramūrtiya kirīṭavendu niravisideyayyā,paraśivaliṅgēśvara.