Index   ವಚನ - 111    Search  
 
ಬಳಿಕ್ಕ, ಭೂತಾಂತಮನುದ್ಧರಿಸಿ ತ್ರಯೋದಶಾಂತ ಸ್ವರದೊಳದಂ ಬೆರಸಿ ಕಾರ್ಯಕಾರಣಮನೊಂದಿಸೆ ಹೌಂ ಎಂಬ ಮೊದಲ ಬೀಜವಾಯ್ತು. ಮತ್ತವಿೂ ಶವರ್ಗದ ಮೊದಲಕ್ಕರಮಾದ ಶಕಾರವ್ಯಂಜನದೊಳ್ತ್ರಿ ಕಲೆ ಯೆನಿಪಿಕಾರಮಂ ಕೂಡೆ ಶಿ ಯೆನಿಸಲ್ ಸೋಮಸಂಜ್ಞ ಕುಬೇರವರ್ಗದ ಕಡೆಯ ವಕಾರಮಂ ದ್ವಿಕಲೆವೆಸರ ಆಕಾರದೊಡವೆರಸೆ ವಾಯೆಂದಾಯ್ತು. ಮತ್ತಂ, ಸೋಮವರ್ಗದಾದಿಯ ಯ್‍ಕಾರ ವ್ಯಂಜನಮನಾದಿ ಸ್ವರದೊಳ್ಕೂಡೆ ಯ ಎಂದೆನಿಸಿತ್ತು. ವರುಣವರ್ಗದ ಕಡೆಯ ನ್ ಎಂಬ ವ್ಯಂಜನಮನಾದಿ ಸ್ವರದೊಳ್ಕೂಡೆ ನ ಎಂದೆನಿಸಿತ್ತು. ವಾಯುವರ್ಗದ ಕಡೆಯ ಮ್ ಎಂಬ ವ್ಯಂಜನದೊಳ್ ಸ್ವರಾದಿಯಂ ಕೂಡೆ ಮ ಎಂದೆನಿಸಿತ್ತು. ಈ ಹೌಂ ಸ ಶಿವಾಯ ನಮಃ ಎಂಬೀ ಷಡಕ್ಷರವೆ ಅಭಿವೃದ್ಧಿಯೆಂಬ ಮಂತ್ರವೆಂದರಿಪಿದೆಯಯ್ಯಾ, ಪರಮಶಿವಲಿಂಗ ಪ್ರಮಥಾಂತರಂಗ.