Index   ವಚನ - 121    Search  
 
ಬಳಿಕ್ಕಂ, ಶಿವಲಿಂಗದಲ್ಲಿ ಪಂಚಪ್ರಸಾದಮಂತ್ರ ನ್ಯಾಸಮಂ ಪೇಳ್ವೆನೆಂತೆನೆ- ಶಿವಲಿಂಗದ ಮಸ್ತಕದ ಮೇಲೆ ಹ ಎಂಬ ಶುದ್ಧ ಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಸೂತ್ರ ಮಧ್ಯದಲ್ಲಿ ಹ್ರೌಂ ಎಂಬ ಮೂಲಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಬಲದಭಾಗದಲ್ಲಿ ಹಂ ಎಂಬ ತತ್ವಪ್ರಸಾದಮಂ ನ್ಯಾಸಂಗೆಯ್ವು- ದೆಡದಭಾಗದಲ್ಲಿ ಹೌಂ ಎಂಬಾದಿಪ್ರಸಾದಮಂ ನ್ಯಾಸಂಗೆಯ್ವುದು. ಮಧ್ಯಸೂತ್ರದ ಬುಡದಲ್ಲಿ ಹಂಸ ಎಂಬಾತ್ಮಪ್ರಸಾದಮಂತ್ರಮಂ ನ್ಯಾಸಂಗೆಯ್ವುದಿಂತು ಹ ಹ್ರೌಂ ಹಂ ಹೌಂ[ಹಂ]ಸ ಎಂಬ ಪಂಚಪ್ರಸಾದಮಂತ್ರಂಗಳ ನ್ಯಾಸಂಗಳಂ ಶಿವಲಿಂಗದ ಪಂಚಸ್ಥಾನಂಗಳಲ್ಲಿ ನ್ಯಾಸೀಕರಿಸಿದೆಯಯ್ಯಾ, ಪರಮಗುರು ಪರಶಿವಲಿಂಗೇಶ್ವರ.