Index   ವಚನ - 128    Search  
 
ಇಂತು, ಪಂಚಪ್ರಣವ ನಿರೂಪಣಾನಂತರದಲ್ಲಿಯಾ ಪಂಚಪ್ರಣವಂಗಳ್ಗೆ ವರ್ಣಂ ಛಂದಂ ರಿಸಿ ಭೂತಂ ತತ್ವ ಅಧಿದೈವಂ ಮಾತ್ರೆಗಳೆಂಬಿವರ ವಿವರಮಂ ಪೇಳ್ವೆನೆಂತೆನೆ- ಮೊದಲಲ್ಲಿ ಸಾಕಲ್ಯಪ್ರಣವಕ್ಕೆ ರಕ್ತವರ್ಣಂ, ಅನುಷ್ಟಪ್ ಛಂದಂ, ರಿಸಿ ಸನತ್ಕುಮಾರಂ, ಪೃಥ್ವಿ ಭೂತಂ, ಕರ್ಮಸಾದಾಖ್ಯ ತತ್ವಂ. ಈಶಾನನಧಿದೈವಂ, ಚತುರ್ಮಾತೆಗಳುಕ್ತಂಗಳಿನ್ನುಂ ಶಾಂಭವಪ್ರಣವಕ್ಕೆ ಅಂಜನ ವರ್ಣಂ, ತ್ರಿಷ್ಟಪ್ ಛಂದಂ, ರಿಸಿ ಭಾರದ್ವಾಜಂ, ಅಪ್ಪು ಭೂತಂ, ಕರ್ತೃಸಾದಾಖ್ಯ ತತ್ವಂ- ಈಶಾನನಧಿದೈವತಂ, ಪಂಚಮಾತ್ರೆಗಳುಕ್ತಂಗಳ್ಮತ್ತಂ ಸೌಖ್ಯಪ್ರಣವಕ್ಕೆ ಗೋಕ್ಷೀರವರ್ಣಂ, ಬೃಹತಿ ಛಂದಂ, ರಿಸಿ ವಿಶ್ವಾಮಿತ್ರಂ, ತೇಜ ಭೂತಂ, ಮೂರ್ತಸಾದಾಖ್ಯ ತತ್ವಂ, ಬ್ರಹ್ಮೇಶನಧಿದೈವತಂ, ಚತುರ್ಮಾತ್ರೆಗಳುಕ್ತಂಗಳಿನ್ನುಂ ಸಾವಶ್ಯಪ್ರಣವಕ್ಕೆ ಕುಂಕುಮವರ್ಣಂ, ಜಗತಿ ಛಂದಂ, ರಿಸಿ ಗೌತಮಂ, ವಾಯುಭೂತಂ, ಅಮೂರ್ತಸಾದಾಖ್ಯ ತತ್ವಂ, ಈಶ್ವರನಧಿದೈವತಂ, ಪಂಚಮಾತ್ರೆಗಳುಕ್ತಂಗಳಿನ್ನುಂ ಸಾಯುಜ್ಯಪ್ರಣವಕ್ಕಿದೇ ತೆರದಿಂ ಗ್ರಂಥಾಂತರದೊಳ್ನೋಡಿಕೊಳ್ವುದೀ ಪೂರ್ವೋಕ್ತವಾದ ಪ್ರಣವಾಂಗ ಮಾತ್ರೆಗಳಲ್ಲಿ ಸಮಸ್ತ ಮಾತ್ರೆಗಳ್ಗೆಯುಂ ಪ್ರಣವನಾಮದಿಂ ಪ್ರಾಣಸ್ವರೂಪವಾದ ಶಿವಬೀಜ ಸಂಜ್ಞಿಕವೆನಿಪ ಹಕಾರವೆ ನಾದಂ, ಮಿಕ್ಕಕ್ಕರಂಗಳಾ ನಾದಬ್ರಹ್ಮಕ್ಕೆ ಬಿಂದು ಸಂಜ್ಞಿಕ ಶಕ್ತಿಗಳೆನಿಪವಾ ಶಿವಶಕ್ತ್ಯಾತ್ಮಕವಪ್ಪ ಹ ಎಂಬ ನಾದಬ್ರಹ್ಮವೆ ಶರೀರಾದಿಗಳ ಸೃಷ್ಟಿ ಸ್ಥಿತಿ ನಿಮಿತ್ತಕ್ಕೆ ತತ್ಪ್ರಾಣಿಗಳ ಹೃದಯಾಂತರವ- ನೆಯ್ದಲೆಲ್ಲಾ ಮುಮುಕ್ಷುಗಳಾ ನಾದಬ್ರಹ್ಮವಪ್ಪ ಪ್ರಣವೋಚ್ಚರಣೆಯಂ ಮಾಳ್ಪುದೀ ಪಂಚಪ್ರಣವಂಗಳೆಲ್ಲಕ್ಕೆಯುಂ ಹಕಾರವೆ ಕಾರಣವೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.