ಲಿಂಗ ಸೂತ್ರಾತ್ಮನೋರಪಿ, ವಿಷ್ವತಶ್ಚಕ್ಷು,
ಊರ್ಧ್ವರೇತಂ ವಿರೂಪಾಕ್ಷಃ,
ಪುರುಷಂ ಕೃಷ್ಣಪಿಂಗಳಂ ಋತಂ ಸತ್ಯಂ ಪರಬ್ರಹ್ಮಂ, ಲಿಂಗಂಮನಂ
ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮಧಿಷ್ಠಾನಾಂ ಸಮಸ್ತಸ್ಯಂ”
ಎಂಬ ಶ್ರುತಿಯುಂಟಾಗಿ;
ಜಗವೆಲ್ಲಾ ನೇತ್ರಂಗಳಾಗಿರ್ಪಾತನು ಶಿವನೆನಲಾ ಶ್ರುತಿ
ಜಗವೆಲ್ಲಾ ನೇತ್ರಂಗಳಾಗಿದ್ದರೆ,
ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ್ಠಂಗಳೇಕಾದವೆಂದಡೆ,
ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ
ತನ್ನ ತಾ ತೋರದಿದ್ದಂತೆ,
ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು.
ಅದೀಗ ಉತ್ತಮವು.
ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು
ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ.
ಅದು ಮಧ್ಯವೆನಿಸಿತ್ತು.
ಅಪವಿತ್ರಜೀವಿಗಳಾದ ಭವಿಗಳ ನೇತ್ರವು
ಉಭಯ ಕರ್ಮಕ್ಕನುಕೂಲವಾದ ಕಾರಣ,
ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು,
ಮೀನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು
ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು,
ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು,
ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು,
ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು.
ಅವರಿಂಗಿಷ್ಟಲಿಂಗಧಾರಣವಿಲ್ಲದ ಕಾರಣ,
ಕನಿಷ್ಠವೆಂದು ಪೇಳಲ್ಪಟ್ಟಿತ್ತು.
ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ.
ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ
ಎದುರಿಟ್ಟು ನೋಡುತ್ತಿಹರಾಗಿ,
ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ.
ಅವರ ಬಹುಜನ್ಮಾಂತರದ ಮಹಾಪಾತಕಂಗಳು
ತಮ್ಮ ಸೋಂಕವೆಂದು,
ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ
ಗುಹೇಶ್ವರಲಿಂಗವನೊಡಗೂಡುವರು ನೋಡಾ.
Hindi Translation"लिंगसूत्रात्मनोरपि, विश्वतश्चक्षुं।
ऊर्द्वरेतं, विरुपाक्ष:, पुरुषंकृष्णपिंगलं।
ॠतगंसत्यंपरब्रह्मं, लिंगमनं,
तमव्यक्तमचिंत्यं, लिंगं शिव
परात्परमघिष्टानां समस्तस्यं"_
ऐसी श्रुति होने से__
सब जग नेत्र बने हुए शिव कहनेवाली श्रुति
सब जग नेत्र हुए हो तो,
नेत्रों में उत्तम, मध्यम, कनिष्ट क्यों हुए कहें तो,
नेत्र का नेत्र बने जग नेत्र को प्रकाश बने
अपने आप बिना दिखाये जैसे,
ज्योतिर्लिंग को ही देख नेत्र लिंगनेत्र ।
वह अब उत्तम।
खग मृग क्रिमिकीट पतंग नेत्र
उभय कर्म में न होने से दृष्टि दोष नहीं।
वह मध्यम कहलाया था
अपवित्र जीवी बने भवि के नेत्र उभय कर्म के
अनुकूल बने कारण,
चर्मचक्षु कहते अपने आप को न जाने गाढांधकार कहते,
मीननेत्र कहते विषनेत्र, विषयनेत्र कहते
मन्मथ के साथ लगे नीलोत्पल बाण कहते,
तामसाग्नि कहते, नेत्रेंद्रिय कहते,
शिवलांछनधारी को बिगड़े महा पातक दृष्टि कहते,
विषय हवा कहलाया था।
उनको इष्टलिंग धारण न होने के कारण
कनिष्ट कहलाया था।
इस कारण शिवभक्त उनको नहीं देखते।
वे सुकर्म दुष्कर्म जैसे माया रूपों को
सामने रखें देखते रहने से,
शिवार्चना शिवार्पण नहीं करते।
उनके बहुजन्मांतर के महापातकों को
शिवभक्त अपने को न स्पर्श करते कहते
मेरु गिरि पकड़े घोरास्त्र प्रयोग से जलाकर
गुहेश्वर लिंग के साथ मिलेंगे देख।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura