•  
  •  
  •  
  •  
Index   ವಚನ - 1488    Search  
 
ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ ಆ ಪುಷ್ಪ ಕರಣದೊಳಗಡಗಿತ್ತಯ್ಯ. ಷೋಡಶ ಕಳೆ ಹದಿನಾರೆಸಳು ವಿಕಸಿತವಾಯ್ತು. ಪರುಷ ಪುಷ್ಪದ ಮರನು, ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು, ನಿದ್ರೆಯ ಕಪ್ಪೊತ್ತದು. ಅರುಣ ಚಂದ್ರಾದಿಗಳಿಬ್ಬರ ನೆರೆಯುಂಡು ಬೆಳೆಯದ ಪುಷ್ಪ ಲಿಂಗವೆ ಧರೆಯಾಗಿ ಬೆಳೆಯಿತ್ತು, ಆ ಪುಷ್ಪ ನೋಡಾ! ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು ಗುಹೇಶ್ವರಾ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದಾ.
Transliteration Liṅgārcaneya māḍalendu puṣpakke kaiya nīḍidaḍe ā puṣpa karaṇadoḷagaḍagittayya. Ṣōḍaśa kaḷe hadināresaḷu vikasitavāytu. Paruṣa puṣpada maranu, adu ōgarada gobbaravanuṇṇadu, kāmada kaṇṇiriyadu, nidreya kappottadu. Aruṇa candrādigaḷibbara nereyuṇḍu beḷeyada puṣpa liṅgave dhareyāgi beḷeyittu, ā puṣpa nōḍā! Ā puṣpavendigū nirmālyavallendu guhēśvarā, nim'ma śaraṇa prāṇaliṅgakke prāṇapūjeya māḍidā.
Hindi Translation लिंगार्चन करने पुष्प को हाथ पसारे तो वह पुष्प करण में छिपा था। षोडश कला सोलह दल विकसित हुए थे। परुष पुष्प का पेड, वह नैवेद्य का गोबर नहीं खाता, काम की आँख नहीं जानता, नींद भी नहीं लगती। अरुण चंद्र दोनों का सहारा पाकर न पलनेवाला पुष्प लिंग ही धरा बने पला था, उस पुष्प को देख, वह पुष्प कभी भी निर्माल्य नहीं समझे गुहेश्वरा, तुम्हारे शरण ने प्राणलिंग की प्राण पूजा की। Translated by: Eswara Sharma M and Govindarao B N