Index   ವಚನ - 136    Search  
 
ಮತ್ತೆಯುಂ, ಸಮಸ್ತಕಲೆಗಳಲ್ಲಿಯುಂ ವಾಮಾದಿ ಸಮಸ್ತ ಶಕ್ತಿಗಳಿರ್ಕುಮಾ ಮೂವತ್ತೆಂಟು ಕಲೆಗಳಲ್ಲಿ ಮೂವತ್ತೆಂಟು ಶಕ್ತಿಗಳಿರ್ಕುಮಾ ವಾಮಾದಿ ಶಕ್ತಿಗಳಿಂದೆಯುಮಕಾರಾದಿಗಳಿಂದೆಯುಂ ಚಂದ್ರ ಸೂರ್ಯಾಗ್ನಿ ಸಂಜ್ಞಿತ ಷೋಡಶ ದ್ವಾದಶದಶಸಂಖ್ಯಾತ ಗಣನೆಗಳೊಡನೆ ಕೂಡಿ ಕಲಾಬ್ರಹ್ಮಮಿರ್ಕು ಮಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ [ಕಲಾಬ್ರಹ್ಮ]ಗಳೆಂಬೀ ಪಂಚಬ್ರಹ್ಮಂಗಳಂ ನ್ಯಾಸಪೂರ್ವಕವಾಗಿ ಸಕಲ ಕಾರ್ಯಂಗಳಲ್ಲಿಯುಂ ಪ್ರಯೋಗಿಪುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.