Index   ವಚನ - 142    Search  
 
ಈ ವಿದ್ಯಾಂಗ ನಿರೂಪಣಾನಂತರದಲ್ಲಿ ಶಕ್ತ್ಯಂಗಮಂ ಪೇಳ್ವೆನೆಂತೆನೆ- ಆಧಾರ ಸಂಜ್ಞಿಕವಾದ ಸಕಾರಂ ಶಕ್ತಿಬೀಜವಾದಕಾರವೇ ಸ್ತ್ರೀತ್ವವಿಷಯವಾಗಿಯಾಕಾರಮಾಗ ಲದರೊಡನೆ ನಾದ ಬಿಂದು ಸಂಜ್ಞಿಕವಾದ ಸೊನ್ನೆ ಬಂದು ಕೂಡಲದು ಸಾಂ ಎಂಬ ಪ್ರಥಮ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಕಾರುಣ್ಯಸಾಗರಾಪಾಂಗ.