Index   ವಚನ - 150    Search  
 
ಮತ್ತಮಾ, ಮೂವತ್ತಾರಂಗಗಳೆಂತೆನೆ- ಹೃದಯಾಂಗಂ ಶುಕ್ಲವರ್ಣಂ. ಶಿರದೊಳಗಂ ಪೀತವರ್ಣಂ. ಶಿಖಾಂಗಂ ರಕ್ತವರ್ಣಂ. ಕವಚಾಂಗಂ ಸ್ಫಟಿಕವರ್ಣಂ. ನೇತ್ರಾಂಗಂ ಶ್ಯಾಮವರ್ಣಂ. ಅಸ್ತ್ರಾಂಗಂ ಕೃಷ್ಣವರ್ಣಂ ಇಂತು ಶಿವಾಂಗದ ವರ್ಣಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.