Index   ವಚನ - 149    Search  
 
ಬಳಿಕ್ಕಮೀ ಸಾಮಾನ್ಯಾಂಗ ಮಂತ್ರದೇವತೆಗಳಂ ಸೂಚನಮಂತ್ರದಿಂ ಸೂಚಿಸುವೆನೆಂತೆನೆ- ವಿಧಿ ವಿಷ್ಣು ಪುರಂದರ ರವಿ ಶಶಿ ಗುಹ ಭೈರವ ವಿಘ್ನೇಶಾಷ್ಟಮೂರ್ತಿ ವಸು ವಿದ್ಯೇಶ ಗಣೇಶ ಲೋಕಪಾಲ ವಜ್ರಾದ್ಯಾಯುಧ ಸಿದ್ಧರ ಗಂಧರ್ವಾಪ್ಸರೋ ಯಕ್ಷ ಕಿನ್ನರ ಭೂತ ಮುನಿ ಖೇಚರರೆಂಬಿವರಿನ್ನುಳಿದ ಸಕಲ ದೇವತೆಗಳಾದ ನಾಮಂಗಳಂ ವರ್ಣಪಟದಲ್ಲಿ ಪೇಳ್ದೇಕೈಕಬೀಜಾಕ್ಷರಂಗಳ ಮೇಲೆ ಪಿಂದೆ ಪೇಳ್ದ ಷಟ್‍ಸ್ವರಂಗಳಂ ಪತ್ತಿಸಿ ಕಾರ್ಯ ಕಾರಣದೊಡವೆರಸಿ ಮೊದಲಂತೆ ಕಾಂ ಕೀಂ ಕೂಂ ಕೈಂ ಕೌಂ ಕಃ ಎಂದಾಯಿತ್ತಿದು ವಿಧಿವೆಸರಿದರಂತೆಲ್ಲಮಂ ನೋಡಿಕೊಂಬುದಿದು ಸಾಮಾನ್ಯಾಂಗವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.