Index   ವಚನ - 160    Search  
 
ಬಳಿಕ್ಕಂ ಕೇವಲಂ ಜ್ಞಾನಜಂ ಯೋಗಜಂ ಭೂತಜಂ ಕಾಮದವೆಂದು ಹೃದಯಾಂಗಮೊಂದೆಯೈದು ತೆರನಿವಕ್ಕೆ ವಿವರಂ- ಶಿವಾಂಗವಾದ ಹೃದಯವೆ ಕೇವಲಹೃದಯವೆನಿಕುಂ. ಸಾಂತಂ ಯಾಂತದೊಡನೆ ಕೂಡಿ ಆದಿವರ್ಗಾಂತ ಸಂಜ್ಞಿಕವಾದೌಕಾರದೊಡನೊಂದಿ ಕಾರ್ಯಕಾರಣದೊಳ್ಬೆರೆಯೆ ಹ್ರೌಂ ಯೆಂದಾಯಿತ್ತಿದೆ ಜ್ಞಾನಜಹೃದಯವೆನಿಕುಂ. ಮತ್ತಂ, ಸಾಂತಮಂಮಾಂತದೊಡಗಲಸಿ ಬಿಂದುವಂ ಬೆರಸೆ ಹ್ಯಂ ಎಂದಾಯಿತ್ತು. ಪುನಸ್ತತ್ವಾಂತಮಂ ಅಕಾರದೊಳ್ಕೂಡಿ ಶಿವಶಕ್ತಿ ಸಂಜ್ಞಿಕ ಬಿಂದುವಿನೊಳ್ಮಿಶ್ರಿಸೆ ಹಂ ಎಂದಾಯಿತ್ತೀ ಯುಭಯಂಗೂಡಿ ಯೋಗಜಹೃದಯವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.