Index   ವಚನ - 167    Search  
 
ಮತ್ತೆಯುಮಂಗಭೇದ ನಿರೂಪಣಾನಂತರದೊಳ್ಮಂತ್ರಜಾತಮಂ ಪೇಳ್ವೆನೆಂತೆನೆ- ಸಾಗರ ತರಂಗ ನ್ಯಾಯದಿಂ ಜಗದಾಧಾರವಾದ ಪರತತ್ವದಲ್ಲಿ ಪರಾರ್ಧಕೋಟಿ ಮಂತ್ರಂಗಳೊಗೆಯಲಾ ಶಿವಲಿಂಗೋದ್ಧರಣೆಯಂ ಜಗದ್ಧಿತಾರ್ಥಂ ಸಕಲ ಮಂತ್ರ ಸಿದ್ಧ್ಯರ್ಥಂ ಭೋಗಮೋಕ್ಷಾರ್ಥಂ ನಿರೂಪಿಸಲುದ್ಯುಕ್ತನಾದೆಯಯ್ಯಾ, ಪರಮ ಶಿವಲಿಂಗಯ್ಯ ಪಟೀರ ಧವಳಕಾಯ.