Index   ವಚನ - 181    Search  
 
ಬಳಿಕ್ಕಮಾ ಮಹಾಲಿಂಗದ ಕಂಠಸಂಜ್ಞಿತವಾದ ಮಣಿಪೂರಕಚಕ್ರ ರುದ್ರರೂಪಮೆಂತೆನೆ ಡ ದಾರುಕರುದ್ರ, ಢ ಅರ್ಧನಾರೀಶ್ವರಂ, ಣ ಉಮಾಕಾಂತಂ. ತ ಆಷಾಡಿ, ಥ ದಂಡಿ, ದ ಅತ್ರಿ ಧ ಮಾನಂ, ನ ಮೇಷಂ, ಪ ಲೋಹಿತಂ, ಫ ಶಿಖಿ, ಇಂತೀ ದಶರುದ್ರರೀ ಮಹಾಲಿಂಗದ ಮಣಿಪೂರಕಚಕ್ರ ದಶಕೋಷ್ಠಗದಳನ್ಯಸ್ತ ದಶಾಕ್ಷರ ವಾಚ್ಯರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.