Index   ವಚನ - 182    Search  
 
ಮರಲ್ದುಮಾ ಮಹಾಲಿಂಗದೂರ್ಧ್ವಾಬ್ಜ ಸಂಜ್ಞೆಯನುಳ್ಳ ಸ್ವಾಧಿಷ್ಠಾನಚಕ್ರದ ರುದ್ರರೂಪಮೆಂತೆನೆ ಬ ಸಕಲಂಡಂ, ಭ ದ್ವಿಲಂಡಂ ಮ ಮಹಾಕಾಲಂ, ಯ ಭುಜಂಗೇಶಂ, ರ ಪಿನಾಕೀಶಂ, ಲ ಖಡ್ಗೀಶಂ. ಇಂತೀ ಷಡ್ವಿಧ ರುದ್ರರೆ ಮಹಾಲಿಂಗದ ಸ್ವಾಧಿಷ್ಠಾನಚಕ್ರದ ಷಟ್ಕೋಷ್ಠದಳನ್ಯಸ್ತ ಷಡಕ್ಷರ ವಾಚ್ಯರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.