Index   ವಚನ - 200    Search  
 
ಮತ್ತಮೀ ಮಂತ್ರಜಾತಮೆಂತೆನೆ- ಆದಿವಾಲವೊಂದು, ಸವಾಲವೆರಡು, ಕೌಮಾರಂ ಮೂರು, ಯೌವನಂ ನಾಲ್ಕು, ಬ್ರಹ್ಮಣನೈದು, ಕ್ಷತ್ರಿಯನಾರು, ವೈಶ್ಯನೇಳು, ಶೂದ್ರನೆಂಟು, ಸ್ತ್ರೀಯೊಂಬತ್ತು, ಪುರುಷಂ ಪತ್ತು, ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು, ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು, ಸಂಕೀರ್ಣಂ ಪದಿನೈದು, ಮಂತ್ರರೂಪಂ ಪದಿನಾರು, ಪ್ರಕೃತಿ ಪದಿನೇಳು, ವಿಕೃತಿ ಪದಿನೆಂಟು- ಮಿವೆಲ್ಲಕ್ಕುವಾದಿಯಾದ ಪೂರ್ಣ ಚಿದ್ಗುಹ ಪತ್ತೊಂಬತ್ತಿಂತೀ ಪತ್ತೊಂಬತ್ತರಿಂ ಮಂತ್ರನಿರ್ಣಯಮೆಂದು ನಿರವಿಸಿದೆಯ್ಯಾ, ಪರಶಿವಲಿಂಗಯ್ಯ.