Index   ವಚನ - 199    Search  
 
ಇಂತು, ಕಾಮಿಕಾದಿ ವಾತೂಲಾಂತವಾಗಿಪ್ಪತ್ತೆಂಟು ದಿವ್ಯಾಗಮ ಪ್ರಣೀತ ಸರ್ವಥಾ ಮಂತ್ರಜಾತಮೆ ಮಹಾಲಿಂಗವೆಂದರಿದು ಪೂಜಿಪುದಲ್ಲದೆ ಮತ್ತೊಂದು ತೆರದಿಂದರ್ಚಿಸಲಾಗ ದರ್ಚಿಸಿದ ಪಕ್ಷದಲ್ಲಾ ಪೂಜೆ ನಿಷ್ಫಲವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.