ಮತ್ತಂ ವಾಹನಮೆಂತನೆ-
ಲಿಂಗದಲ್ಲಿಯುಂ, ಸ್ಥಂಡಿಲೋದ್ಧರಣ ಲಿಂಗದಲ್ಲಿಯುಂ,
ರುದ್ರಮೂರ್ತಿ ಪ್ರತಿಮೆಗಳಲ್ಲಿಯುಂ,
ಪ್ರತಿಷ್ಠಾ ಕಾಲದಲ್ಲಿ ಸ್ಥಾಪಿತ ಕುಂಭಗಳಲ್ಲಿಯುಂ,
ವಸ್ತುವಿನಲ್ಲಿಯುಂ, ಕುಂಡಾಗ್ನಿಯಲ್ಲಿಯುಂ
ಮೂಲಸ್ಥಾನದಲ್ಲಿಯುಂ,
ದೀಕ್ಷಾ ಕಾಲಂಗಳಲ್ಲಿ ಸ್ಥಾಪಿತ ಮಂತ್ರಾವಾಸ ಪ್ರೋಕ್ಷಣ
ಜಲಕಲಶಂಗಳಲ್ಲಿಯೂ,
ಪ್ರಯೋಗಿಸಲ್ಪಟ್ಟುದೆ ಮಂತ್ರವಾಹನವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Mattaṁ vāhanamentane-
liṅgadalliyuṁ, sthaṇḍilōd'dharaṇa liṅgadalliyuṁ,
rudramūrti pratimegaḷalliyuṁ,
pratiṣṭhā kāladalli sthāpita kumbhagaḷalliyuṁ,
vastuvinalliyuṁ, kuṇḍāgniyalliyuṁ
mūlasthānadalliyuṁ,
dīkṣā kālaṅgaḷalli sthāpita mantrāvāsa prōkṣaṇa
jalakalaśaṅgaḷalliyū,
prayōgisalpaṭṭude mantravāhanavendu
niravisideyayyā, paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ