Index   ವಚನ - 208    Search  
 
ಮತ್ತಮಿಲ್ಲಿ ಕಕಾರಾದಿ ಕ್ಷಕಾರಾಂತವಾದ ಮೂವತ್ತೈದಕ್ಕರಂಗಳಲ್ಲಿ ಪ್ರತ್ಯೇಕವಾಗಿ ಒಂದೊಂದಕ್ಕೆ ಪದಿನಾರು ಸ್ವರಾಕ್ಷರಂಗಳಂ ಕೂಡಲಾಗಿವೈನೂರರುವತ್ತಕ್ಷರಂಗಳಾದವು. 'ಕ್ಷಿತೌ ಷಟ್ಪಂಚಾಶತ್' ಎಂದು ಪೃಥ್ವೀತತ್ವದಲ್ಲಿ ಐ[ವತ್ತಾ]ರಕ್ಕರವು, 'ದ್ವಿಚತುರಧಿಕ ಪಂಚಾಶದುದಕೇ'ಯೆಂದು ಆಪ್ತತ್ವದಲ್ಲಿ ಐವತ್ತೆರಡು, 'ಹುತಾಶೆ ದ್ವಾಷಷ್ಠಿ'ಯೆಂದು, ಅಗ್ನಿತತ್ವದಲ್ಲಿ ಅರುವತ್ತೆರಡು, 'ಚತುರಧಿಕ ಪಂಚಾಶದನಿಲೇ'ಯೆಂದು ವಾಯುತತ್ವದಲ್ಲಿ ಐವತ್ತನಾಲ್ಕು, 'ದಿವಿ ದ್ವಿಷಟ್ತ್ರಿಂಶತ್' ಎಂದು ಆಕಾಶತತ್ವದಲ್ಲಿ ಎಪ್ಪತ್ತೆರಡು, 'ಮನಸಿ ಚತುಷ್ಪಷ್ಠಿ' ಎಂದು ಮನಸ್ತತ್ವದಲ್ಲಿ ಅರುವತ್ತನಾಲ್ಕು, ಅಂತು ಮುನ್ನೂರರುವತ್ತು ಚೌಷಷ್ಠಿಕಲಾತತ್ವವ[ರುವ]ತ್ತನಾಲ್ಕು, ಕ ಎ ಇ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸ ಕ ಲ ಹ್ರೀ ಶ್ರೀ ಯೆಂದು ಪದಿನಾರು, ಅಂತು ಬ್ರಹ್ಮರಂಧ್ರದ ಸಹಸ್ರದಳದಲ್ಲಿ ಸಹಸ್ರಾಕ್ಷರವೆಂದು ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯ.