Index   ವಚನ - 207    Search  
 
ಮತ್ತಮಾ, ಸಹಸ್ರಕಮಲದ ವಿಭಾಗೆಯಂ ಋಗ್ವೇದದಲ್ಲಿ ತೋರ್ದಪೆನೆಂತೆನೆ- 'ಆತ್ಮಾನಂ ತೀರ್ಥಂ ಕ ಇಹ ಪ್ರಾಚದ್ಯೇನಪಥಾ ಪ್ರಪಿಬಂತಿಸು ತಸ್ಯ ಸಹಸ್ರಥಾ ಪಂಚದಶಾನ್ಯುಕ್ಥೌ ಯಾವದ್ಯಾವಾಪೃಥಿವೀ ತಾವದಿತ್ತತ್ ಸಹಸ್ರಧಾ ಮಹಿಮಾನಃ ಸಹಸ್ರಃ ಯಾವದ್ಬ್ರಹ್ಮಾದ್ಥಿಷ್ಠಿತಂ ತಾವತೀವಾಕ್' ಟೀಕೆ: ಸಹಸ್ರದಾ: ಸಾವಿರ ಪ್ರಕಾರವಾದ ಮಹಿಮಾನಃ- ಮಹಿಮರೂಪರಾದ ಚಿದಾನಂದಾತ್ಮರುಗಳು ಬ್ರಹ್ಮಧಿಷ್ಠಿತಂ- 'ಬ್ರಹ್ಮಾತ್ಮನಾಂ ಬ್ರಹ್ಮಮಹದ್ಯೋನಿರಹಂ ಬೀಜಪ್ರದಃ ಪಿತಾ' ಎಂದುಂಟಾಗಿ, ಬ್ರಹ್ಮವೆಂದು ಪ್ರಕೃತಿ- ಆ ಪ್ರಕೃತಿಯಿಂದೆ ಅಧಿಷ್ಠಿತಂ- ಅಧಿಷ್ಠಿಸಲ್ಪಟ್ಟುದಾಗಿ, ಸಹಸ್ರಂ- ಸಾವಿರ ಗಣನೆಯನುಳ್ಳುದಾಗಿ ಇತ್- ಲಯಾಧಿಷ್ಠಾನ ರೂಪವಾದ ತತ್- ಆ ಬ್ರಹ್ಮವು, ಯಾವತ್- ಎಷ್ಟು ಪ್ರಮಾಣವುಳ್ಳುದು ತಾವತ್- ಅಷ್ಟು ಪ್ರಮಾಣವಾಗಿ ಆಪ್ಮಾನಂ- ಪಾದೋದಕ ರೂಪವಾದ, ತೀರ್ಥಂ- ತೀರ್ಥವನು ಯೇನ ಪಥಾ- ಆವ ಮಾರ್ಗದಿಂದೆ, ಸು- ಚೆನ್ನಾಗಿ ಪ್ರ ಪಿಬಂತಿ- ಪಾನವ ಮಾಡುವರು ತಸ್ಯ- ಆ ಮಾರ್ಗದ, ಉಕ್ಥಾ- ನಿಲುಕಡೆಯಾದ ವಾಕ್- ಶಬ್ದಬ್ರಹ್ಮವು ಸಹಸ್ರಥಾ-ಸಾವಿರ ಪ್ರಕಾರವುಳ್ಳದಾಗಿ ದ್ಯಾವಾ ಪೃಥಿವೀ- ದ್ಯಾವಾಪೃಥುಗಳ ವ್ಯಾಪಿಸಿಕೊಂಡುದಾಗಿ ಪಂಚ ದಶಾನಿ-ಐವತ್ತು ವರ್ಣಂಗಳಾಕಾರವುಳ್ಳುದಾಗಿ ತಾವತಿ- ಅಷ್ಟಾಗಿಹುದೆಂದು, ಕಃ- ಚತುರ್ಮುಖದ ಬ್ರಹ್ಮನು ಇಹ- ಈರ್ಣಾರ್ಧ್ವದಲ್ಲಿ ಪ್ರಾವೋಚತ್-ನುಡಿದನೆಂದು- ನಿರವಿಸಿದೆಯಯ್ಯಾ ಪರಶಿವಲಿಂಗಯ್ಯ.