Index   ವಚನ - 60    Search  
 
ಕೋಗಿಲೆ ಸ್ವರಗೈದಿತೆಂದು ಕಾಗೆ ಅದಕ್ಕೆ ಇದಿರಾಗಿ ಕುಳಿತು ಕರ್ರೆಂದು ಕಟಕಿಯನಾಡಿದರೆ ಆ ಕೋಗಿಲೆಗಾದ ಕೊರತೆಯೇನಯ್ಯ? ಸೂರ್ಯ ಪ್ರಕಾಶವನುಳ್ಳವನಲ್ಲಿ ಕತ್ತಲೆ ಮೈಯವನೆಂದು ಹಗಲು ಕಣ್ಣು ಕಾಣದ ಗೂಗೆ ಕೆಟ್ಟು ನುಡಿದರೆ ಸೂರ್ಯನಿಗಾದ ಕೊರತೆಯೇನಯ್ಯ? ಕನ್ನಡಿಗೆ ಮೂಗಿಲ್ಲವೆಂದು ಮೂಕೊರೆಯೆ ಹಳಿದರೆ ಆ ಕನ್ನಡಿಗಾದ ಕೊರತೆಯೇನಯ್ಯ? ದ್ವೈತ ಅದ್ವೈತವ ನೂಂಕಿ ಅಂಗ ಲಿಂಗದ ಹೊಲಬನರಿದು ಸ್ವಯಂಲಿಂಗಿಯಾದ ಶರಣನ ಅಂಗವಿಕಾರದ ಪಂಗುಳ ಮಾನವರು ಜರಿದು ಝಂಕಿಸಿ ನುಡಿದರೆ ಆ ಲಿಂಗಾನುಭಾವಿಗಾದ ಕೊರತೆಯೇನಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.