Index   ವಚನ - 5    Search  
 
ತನ್ನ ಹಿತ್ತಿಲೊಳು ಮರುಜೇವಣಿಗೆಯಿದ್ದು, ನಾರುಬೇರುಗಳಿಗೆ ಹರಿವ ಮನುಜರಿಗೆ ನಾನೇನೆಂಬೆನಯ್ಯ! ತನ್ನೊಳಗೆ ಶಿವಲಿಂಗವಿದ್ದು, ಅನ್ಯದೈವಕ್ಕೆರಗುವ ಕುನ್ನಿ ಮನುಜರಿಗೆ ನಾನೆಂಬೆನಯ್ಯ! ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ, ಪಾಪಿಯ ಕಣ್ಣಿಗೆ ಪರುಷ ಕಲ್ಲಾದಂತೆ ಅಯ್ಯ ನೀನು.