ಲಿಂಗದೇವರ ಪಾದದ ನೆನೆವ ನಿತ್ಯಮಾಡಿ,
ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ.
ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ
ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ,
ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು
ಬರಿಯ ಮಾತಿನ ಬಣಬೆಯ ಹಿಡಕೊಂಡು
ತಿರುಗುವ ನರಗುರಿಗಳು,
ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ,
ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ,
ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ
ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ,
ಒಳಗೆ ತೇಜತತ್ವದ ಹೊರಗೆ ತೇಜತತ್ವದ
ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ,
ಒಳಗೆ ವಾಯುತತ್ವದ ಹೊರಗೆ ವಾಯುತತ್ವದ
ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ,
ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ
ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ.
ಇಂತೀ ಇವರು ಆರು ಮಂದಿ ಭವಿಗಳು.
ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು,
ಬೇರೊಂದು ವಿಷ್ಣುಲಿಂಗವಾಗಿ ಬಂದು
ಪೂಜೆಗೊಂಬುತಿದರು ಕಾಣಿರೊ.
ಅದು ಎಂತೆಂದರೆ:
ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ.
ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ
ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ.
ಆ ಲಿಂಗದ ರೂಪನು ನೋಡಿ,
ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ
ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು,
ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ
ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ
ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ,
ಲೋಭವೆಂಬೊ ಭವಿ, ಮೋಹವೆಂಬೊ ಭವಿ,
ಮದವೆಂಬೊ ಭವಿ, ಮತ್ಸರವೆಂಬೊ ಭವಿ.
ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು
ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು
ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ,
ಅಜ್ಜಿಗೆ ಅರಸಿನ ಚಿಂತೆಯಾದರೆ,
ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು,
ಹಲವು ಮಿಂಡಗಾರಗೆ ಸೆರಗುಹಾಸಿಮಾಡಿಕೊಂಡು
ಹೋದಂತಾದೀತು ಕಾಣಿರೊ.
ಅದು ಎಂತೆಂದರೆ:
ಓಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ
ನಕಾರವೆಂಬೊ ಅಕ್ಷರ ಹುಟ್ಟಿ,
ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು
ಚಿಂತೆಯನು ತಾಳಿ,
ಪೃಥ್ವಿತತ್ವವೆಂಬೊ ಆಧಾರ ಬುಡವಾಗಿಯಿದ್ದ ಕಾಣಿರೊ.
ಮಕಾರವೆಂಬೊ ಅಕ್ಷರ ಹುಟ್ಟಿ,
ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ
ಚಿಂತೆಯನು ತಾಳಿ,
ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಶಿಕಾರವೆಂಬೊ ಅಕ್ಷರ ಹುಟ್ಟಿ,
ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನೆಲ್ಲ ರಕ್ಷಿಸಬೇಕೆಂಬೊ
ಚಿಂತೆಯನು ತಾಳಿ,
ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ವಕಾರವೆಂಬೊ ಅಕ್ಷರ ಹುಟ್ಟಿ,
ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಿಗೆಲ್ಲ
ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ
ಚಿಂತೆಯನು ತಾಳಿ,
ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಯಕಾರವಂಬೊ ಅಕ್ಷರ ಹುಟ್ಟಿ,
ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು,
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನೆಲ್ಲ
ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ
ಚಿಂತೆಯನು ತಾಳಿ,
ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಅದು ಎಂತೆಂದಡೆ:
ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ
ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು
ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ
ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ.
ಅದು ಎಂತೆಂದರೆ:
ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ
ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ.
ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ.
ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ,
ವಾಯುತತ್ವವೆಂಬೊ ಭವಿಯ ಅಂಗದೊಳಗೆ
ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ
ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ
ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು.
ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ,
ಭವಿ ಆಧಾರದಲ್ಲಿ ಬೆಳೆದು,
ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ
ಅಡಗಿಕೊಂಡಿದ್ದ ಅಜ್ಞಾನಿಗಳು
ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ.
ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ
ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು
ಶಿಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು
ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು
ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ
ಕೂಗಿ, ಕೂಗಿ ಹೇಳುವ ಕುನ್ನಿಗಳು
ಮಾಡಿದ ಭಕ್ತಿಯೇನಾಯಿತೆಂದರೆ,
ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು
ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ,
ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ
ಇದನೆತ್ತುವರಾರುಂಟೊ,
ದೇವಧ್ವಜ ಮೃತ್ಯಂಜಯನ
ಭಾವದೊಲ್ಲಭ ಮುದ್ದನೂರೇಶಾ?
Art
Manuscript
Music
Courtesy:
Transliteration
Liṅgadēvara pādada neneva nityamāḍi,
hēmada kūṭada hiriyarugaḷu āśīrvāda binnaha.
Aṅgada mēle liṅgavanu kaṭṭi śivabhaktarāda mēle
bhavigaḷu iddalli śivaśāstrava ōdi,
bhavigaḷa paṅktiyalli annavanu uṇalāgadendu
bariya mātina baṇabeya hiḍakoṇḍu
tiruguva naragurigaḷu,
ādhāracakradalli brahmanembo bhavi huṭṭi,
horage pr̥thvitatvada svādhiṣṭadalli viṣṇuvembo bhavi huṭṭi,
oḷage apputatvada horage apputatvada
maṇipūrakadalli rudranembo bhavi huṭṭi,
Oḷage tējatatvada horage tējatatvada
anāhatadalli īśvaranembo bhavi huṭṭi,
oḷage vāyutatvada horage vāyutatvada
viśud'dhiyalli sadāśivanemba bhavi huṭṭi,
oḷage ākāśatatvada horage ākāśatatvada
agniyinda parabrahmanembo bhavi huṭṭi.
Intī ivaru āru mandi bhavigaḷu.
Bhaktana antaraṅgadoḷu huṭṭi, antaraṅgadoḷu beḷedu,
bērondu viṣṇuliṅgavāgi bandu
pūjegombutidaru kāṇiro.
Adu entendare:
Brahmanemba bhavi, viṣṇuvemba bhavi, rudranemba bhavi.
Intivaru mūrumandi bhavigaḷu ondugūḍalike
īśvaranemba liṅgākāra bhaviyāyitu kāṇiro.
Ā liṅgada rūpanu nōḍi,
śilpakāraru tam'ma hoṭṭekiccige
kaṭediṭṭu māruva śileya liṅgava tandu,
śiradalli kaṭṭi, karadalli pūje māḍi
śivabhaktarendu hesariṭṭukoṇḍu nuḍiva aṇṇagaḷa
aLōbhavembo bhavi, mōhavembo bhavi,
madavembo bhavi, matsaravembo bhavi.
Intī [ī]rāru hanneraḍumandi bhavigaḷanu
hattēliyiṭṭukoṇḍu, kūḍiyuṇḍu
kulavanarasuvantha kōtigaḷu māḍida bhakti ēnāyitendare,
ajjige arasina cinteyādare,
magaḷige miṇḍagārana cinteyanu māḍikoṇḍu,
halavu miṇḍagārage seraguhāsimāḍikoṇḍu
hōdantādītu kāṇiro.
Adu entendare:ntaraṅgadoḷu kāmavembo bhavi, krōdhavembo bhavŌṅkāra parabrahmanembo viprana garbhadalli
nakāravembo akṣara huṭṭi,
sadyōjātamukhadalli brahmanembo bhaviyāgi bandu,
embattunālku lakṣa jīvarāśigaḷanella huṭṭisabēkendu
cinteyanu tāḷi,
pr̥thvitatvavembo ādhāra buḍavāgiyidda kāṇiro.
Makāravembo akṣara huṭṭi,
vāmadēvamukhadalli viṣṇuvembo bhaviyāgi bandu,
embattunālkulakṣa jīvarāśigaḷigella rakṣisabēkembo
cinteyanu tāḷi,
Apputatvavembo ādi ādhārada buḍavāgiyidda kāṇiro.
Śikāravembo akṣara huṭṭi,
aghōramukhadalli rudranembo bhaviyāgi bandu,
embattunālku lakṣa jīvarāśigaḷanella rakṣisabēkembo
cinteyanu tāḷi,
tējatatvavembo ādi ādhārada buḍavāgiyidda kāṇiro.
Vakāravembo akṣara huṭṭi,
tatpuruṣamukhadalli īśvaranembo bhaviyāgi bandu,
embattunālku lakṣa jīvarāśigaḷigella
aṅgadoḷage prāṇaliṅgavāgi pūjegoḷabēkemba
cinteyanu tāḷi,
Apputatvavembo ādi ādhārada buḍavāgiyidda kāṇiro.
Śikāravembo akṣara huṭṭi,
aghōramukhadalli rudranembo bhaviyāgi bandu,
embattunālku lakṣa jīvarāśigaḷanella rakṣisabēkembo
cinteyanu tāḷi,
tējatatvavembo ādi ādhārada buḍavāgiyidda kāṇiro.
Vakāravembo akṣara huṭṭi,
tatpuruṣamukhadalli īśvaranembo bhaviyāgi bandu,
embattunālku lakṣa jīvarāśigaḷigella
aṅgadoḷage prāṇaliṅgavāgi pūjegoḷabēkemba
cinteyanu tāḷi,
i,Vāyutatvavembo ādi ādhārada buḍavāgiyidda kāṇiro.
Yakāravambo akṣara huṭṭi,
īśān'yamukhadalli sadāśivanemba bhaviyāgi bandu,
embattunālku lakṣa jīvarāśigaḷannella
tanna antaraṅgadoḷage imbiṭṭu irabēkemba
cinteyanu tāḷi,
ākāśatatvavembo ādi ādhārada buḍavāgiyidda kāṇiro.
Adu entendaḍe:
Intī ippattaidu tatvagaḷa ādhāradalli huṭṭida
bhaktaremba kombegaḷu māḍida bhaktiyenagāyitu
andare, pr̥thvitatvada ādhāradalli huṭṭida kasakaḍḍigaḷella
kusukinda harakoṇḍu tindu harihōdante kāṇiro.
Adu entendare:
Bhavigaḷa ādhāradalli bhaktaremba kombegaḷu huṭṭi
pr̥thvitatvavembo bhaviya huṭṭisendare huṭṭisalilla.
Apputatvavembo bhaviya rakṣisiyendare, rakṣisiyiddilla.
Tējatatvayembo bhaviya bhakṣisiyendare, bhakṣisiyiddilla,
vāyutatvavembo bhaviya aṅgadoḷage
liṅgavāgi pūjegoṇḍiddare pūjegoṇḍiddillā
ākāśatatvayembo bhaviyanu tam'ma antaraṅgadoḷage
mareyoḷage imbiṭṭukoṇḍu iralārada ajñānigaḷu.
Pr̥thvitatvavembo bhavi ādhāradalli huṭṭi,
bhavi ādhāradalli beḷedu,
ākāśatatvavembo bhaviya antaraṅgada mareyalli
aḍagikoṇḍidda ajñānigaḷu
Brahmanembo bhavi, viṣṇuvembo bhavi, rudranembo bhavi.
Mūvaru trimūrtigaḷu kūḍi ēkamūrtiyāda
ākāraliṅgavanu tandu, tam'ma śiradalli kaṭṭikoṇḍu
śibhaktane heccu, bhavi kaḍimeyendu
kaiyalli kan̄jarada bākane hiḍidukoṇḍu
ken̄jaḍeya biṭṭukoṇḍu, vīragāseyante kuṇidāḍi
kūgi, kūgi hēḷuva kunnigaḷu
māḍida bhaktiyēnāyitendare,
kailāsada nāyigaḷu kaimaiyanna harakoṇḍu
vaihāḷiya bayalige hōgi, odaridare,
sattantāyitendu ikkuvenu muṇḍigeya
idanettuvarāruṇṭo,
dēvadhvaja mr̥tyan̄jayana
bhāvadollabha muddanūrēśā?