ಅಕಾರ ಉಕಾರ ಈ ಎರಡೂ ಕೂಡಿ ಓಂಕಾರವಾಯಿತ್ತು
ಮಕಾರವೆಂಬ ಬಿಂದು ಕೂಡಲು ಓಂ
ಎಂಬುವನ್ಯೋದ್ಧಾರಣವಾಯಿತ್ತು
ಆ ವರ್ಣವೆ ಪಂಚಾವಯವನುಳ್ಳ ಪರಬ್ರಹ್ಮವೆಂದು
ಸಮಸ್ತಯೋಗೀಶ್ವರರು ಹೇಳುತ್ತಲಿಹರು ಅದೆಂತೆಂದಡೆ :
ಅಕಾರೋಕಾರ ಸಂಯೋಗದೋಕಾರಃ ಸ್ವರ ಉಚ್ಯತೇ |
ಓಮಿತ್ಯೇಕಾಕ್ಷರಂ ಬ್ರಹ್ಮವದಂತಿ ಸರ್ವಯೋಗಿನಃ ||
ಸರ್ವವ್ಯಾಪಿ ನಮೋಕಾರಂ ಮತ್ವಾಧಿರೋ ನ ಶೋಚತಿ|
ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ ||
ಎಂದುದಾಗಿ, ಆ ಪಂಚಾವಯವನುಳ್ಳ ಪ್ರಣಮದ
ತಾರಕೃತಿಯಲ್ಲಿ ಯಕಾರ ಜನಿಸಿತ್ತು.
ಆ ಪ್ರಣಮದ ದಂಡಾಕೃತಿಯಲ್ಲಿ ವಕಾರ ಹುಟ್ಟಿತ್ತು
ಆ ಪ್ರಣಮದ ಕುಂಡಲಿಯಲ್ಲಿ ಶಿಕಾರ ಉದಯವಾಯಿತ್ತು.
ಆ ಪ್ರಮಾಣದ ಅರ್ಧಚಂದ್ರಾಕೃತಿಯಲ್ಲಿ ಮಕಾರ ಹುಟ್ಟಿತ್ತು.
ಆ ಪ್ರಮಣಕ್ಕೆ ಮುಖವಾದ ಬಿಂದುವಿನಲ್ಲಿ ನಕಾರ ಜನನವಾಯಿತ್ತು,
ಅದೆಂತೆಂದಡೆ:
ಯಕಾರಂ ತಾರಕಂ ಜ್ಞೇಯಂ ವಕಾರಂ ದಂಡ ಉಚ್ಯತೇ |
ಶಿಕಾರಂ ಕುಂಡಲಂ ಪ್ರೋತ್ತಂ ಮಕಾರಂ ಚೌರ್ಧಚಂದ್ರಕಂ|
ನಕಾರಂ ಬಿಂದು ಸಂಪ್ರೊತ್ತಂ ಪ್ರಣವಃ ಪಂಚವರ್ಣಜಃ ||
ಎಂದುದಾಗಿ, ಮತ್ತಂ ನಕಾರಂ ಕರ್ಮೇಂದ್ರಿಯಂಗಳು ಹುಟ್ಟಿದವು.
ಮಕಾರದಿಂ ವಿಷಯಂಗಳು ಜನನವಾದವು
ಶಿಕಾರದಿಂ ಜ್ಞಾನೇಂದ್ರಿಯಂಗಳುತ್ಪತ್ತಿ
ವಕಾರದಿಂ ವಾಯುಗಳು ಹುಟ್ಟಿದವು
ಯಕಾರಂ ಕರಣಂಗಳು ಜನನವಾದವು
ಓಂಕಾರವೆ ಸರ್ವಚೇತನಾತ್ಮಕವಾಯಿತ್ತು.
ಅದೆಂತೆಂದಡೆ:
ನಕಾರಂ ಕರ್ಮಸಂಜಾತಮಕಾರೋ ವಿಷಯೋದ್ಭವಃ|
ಶಿಕಾರಮಿಂದ್ರಿಯಂ ಪ್ರೋತ್ತಂ ವಕಾರಂ ವಾಯುರುಚ್ಯತೇ||
ಯಕಾರಂ ಕರಣೋತ್ಪತ್ತಿ ಓಂಕಾರಂ ಚೇತನಾತ್ಮಕಃ|
ಮಂತ್ರಮೂರ್ತಿಮಿದಂ ದೇವಿ ಏವಂ ಜ್ಞಾತ್ವಾ ವಿಚಕ್ಷಣಃ ||
ಎಂದುದಾಗಿ, ಇಂತಪ್ಪ ಮಂತ್ರಮೂರ್ತಿಯಾದ ಚೇತನಾತ್ಮಕ ತಾನೆ,
ಪರಮಗುರುವೆ ನಂಜುಂಡಶಿವಾ.
Art
Manuscript
Music
Courtesy:
Transliteration
Akāra ukāra ī eraḍū kūḍi ōṅkāravāyittu
makāravemba bindu kūḍalu ōṁ
embuvan'yōd'dhāraṇavāyittu
ā varṇave pan̄cāvayavanuḷḷa parabrahmavendu
samastayōgīśvararu hēḷuttaliharu adentendaḍe:
Akārōkāra sanyōgadōkāraḥ svara ucyatē |
ōmityēkākṣaraṁ brahmavadanti sarvayōginaḥ ||
sarvavyāpi namōkāraṁ matvādhirō na śōcati|
praṇavōhi parabrahma praṇavaḥ paramaṁ padaṁ ||
endudāgi, ā pan̄cāvayavanuḷḷa praṇamada
tārakr̥tiyalli yakāra janisittu.
Ā praṇamada daṇḍākr̥tiyalli vakāra huṭṭittu
ā praṇamada kuṇḍaliyalli śikāra udayavāyittu.
Ā pramāṇada ardhacandrākr̥tiyalli makāra huṭṭittu.
Ā pramaṇakke mukhavāda binduvinalli nakāra jananavāyittu,
adentendaḍe:
Yakāraṁ tārakaṁ jñēyaṁ vakāraṁ daṇḍa ucyatē |
śikāraṁ kuṇḍalaṁ prōttaṁ makāraṁ caurdhacandrakaṁ|
nakāraṁ bindu samprottaṁ praṇavaḥ pan̄cavarṇajaḥ ||
endudāgi, mattaṁ nakāraṁ karmēndriyaṅgaḷu huṭṭidavu.
Makāradiṁ viṣayaṅgaḷu jananavādavu
śikāradiṁ jñānēndriyaṅgaḷutpatti
vakāradiṁ vāyugaḷu huṭṭidavu
yakāraṁ karaṇaṅgaḷu jananavādavu
ōṅkārave sarvacētanātmakavāyittu.
Adentendaḍe:
Nakāraṁ karmasan̄jātamakārō viṣayōdbhavaḥ|
śikāramindriyaṁ prōttaṁ vakāraṁ vāyurucyatē||
yakāraṁ karaṇōtpatti ōṅkāraṁ cētanātmakaḥ|
mantramūrtimidaṁ dēvi ēvaṁ jñātvā vicakṣaṇaḥ ||
endudāgi, intappa mantramūrtiyāda cētanātmaka tāne,
paramaguruve nan̄juṇḍaśivā.