Index   ವಚನ - 2    Search  
 
ಅತಳ ವಿತಳ ಸುತಳ ನಿರಾತಳ ತಳಾತಳ ರಸಾತಳ ಪಾತಾಳ ಭೂಲೋಕ ಭುವರ್ಲೋಕ ಸ್ವರ್ಗಲೋಕ ಮಹರ್ಲೋಕ ಜನಲೋಕ ತಪರ್ಲೋಕ ಸತ್ಯಲೋಕವೆಂದಿಂತು ಈರೇಳುಲೋಕಂಗಳು ಮೇರು ಮಂದರ ಕೈಲಾಸ ಹಿಮಾಲಯ ನಿಷಾಧ ಗಂಧ ಮಾಧವವೆಂದಿಂತು ಸಪ್ತಕುಲಪರ್ವತಂಗಳು ಜಂಬು ಶಾಖ ಕುಶ ಕ್ರೌಂಚ ಶಾಲ್ಮಲಿ ಗೋಮೇಧ ಪುಷ್ಕರವೆಂದಿಂತು ಸಪ್ತದ್ವೀಪಂಗಳು ಕ್ಷಾರ ಕ್ಷೀರ ದಧಿ ಸರ್ಪಿ ಇಕ್ಷು ಮಧು ಸ್ವಾದೋದಕವೆಂದಿಂತು ಸಪ್ತಸಮುದ್ರಂಗಳು. ಆದಿತ್ಯ ಸೋಮ ಮಂಗಳ ಬುಧ ಬೃಹಸ್ಪತಿ ಶುಕ್ರ ಶನಿ ರಾಹು ಕೇತುಗಳೆಂದಿಂತು ನವಗ್ರಹಂಗಳು ಇಂತಿವೆಲ್ಲವು ಪಿಂಡಮಧ್ಯದಲ್ಲಿ ಇರುತ್ತಿಹವು ಅದೆಂತೆಂದಡೆ: ವಾತಾಳು ಭೂಧರಂ ಲೋಕೆ ತವಾನ್ಯೇ ದ್ವೀಪಸಾಗರಾಃ | ಆದಿತ್ಯಾದಿಗ್ರಹಾ ಸರ್ವೇಪಿಂಡಮಧ್ಯೇ ವ್ಯವಸ್ಥಿತಾಃ || ಪಾದಾಧಸ್ತತಳಂ ವಿಂಧ್ಯಾತ್ ಪಾದೋಧ್ವೆ ವಿತಳಂ ಭರ್ವೇತ್ | ಜಾನುಭ್ಯಾಂ ಸುತಳಂ ಜ್ಞೇಯಂ ನಿತಳ ಸಂಧಿ ಬಂಧನೇ | ತಳಾತಳಮದೂರೂಭ್ಯಂ ಗುಹ್ಯಸ್ಥಾನೇ ರಸಾತಳಂ | ಪಾತಾಳಂ ಕಟಿಸಂಧಿಸ್ತು ಪಾದಾದೌ ಲಕ್ಷಯೇದ್ಭುಧಃ || ಭೂಲೋಕಂ ನಾಭಿಮಧ್ಯೇತು ಭುವರ್ಲೋಕಂ ಚ ಕುಕ್ಷಯೋಃ | ಹೃದಯ ಸ್ವರ್ಗಲೋಕಂ ಚ ಮಹರ್ಲೋಕಂತು ಕಂಠಕೇ|| ಜನರ್ಲೋಕೆ ತದೂಧ್ವೆತು ತಪರ್ಲೋಕಂತು ಲಲಾಟಕೇ | ಸತ್ಯರ್ಲೋಕಂ ಭವೇನ್ಮೂದ್ನಿಭುವನಾನಿ ಚತುರ್ದಶಃ || ತ್ರಿಕೋಣೇ ಸಂಸ್ಥಿತೋ ಮೇರು ಅಧಃಕೋಣೇತು ಮಂದರಃ | ಕೈಲಾಸದಕ್ಷಿಣೇ ಕೋಣೇ ವಾಮಕೋಣೇ ಹಿಮಾಲಯಃ || ನಿಷಾಧಮೋರ್ಧ್ವ ಭಾಗೇಚ ದಕ್ಷಿಣೇ ಗಂಧ ಮಾಧನಃ | ರೋಮಕಂ ರೋಮರೇಖಾಯಾಂ ಸಪ್ತೈತೇ ಕುಲಪರ್ವತಾಃ|| ಅಸ್ಥಿಸ್ಥಾನೇ ಸ್ಥಿತೋ ಜಂಬುಮಜ್ಜಾಶಾಖಾಕಾವ್ಯವಸ್ಥಿತಃ | ಕುಶದ್ವೀಪಸ್ತಥಾಮಾಂಸೇ ಕ್ರೌಂಚದ್ವೀಪಂ ರಸೇಷು ಚ|| ತ್ವಚಾಯಾಶಾಲ್ಮಲೀ ದ್ವೀಪೋ ಗೋಮೇದೋರೋಮಸಂಚಯಃ || ನಭಸ್ಥಂ ಪುಷ್ಕರಂ ವಿಂಧ್ಯಾತ್ ಸಾಗರಂ ತದನಂತರಂ | ಕ್ಷಾರೋದಶ್ಚ ತಥಾ ಮೂತ್ರಂ ಕ್ಷಿರೇಕ್ಷಿರೋದ ಸಾಗರಃ|| ದಧಾರ್ಣವ ತಥಾ ಶ್ಲೇಷ್ಮೇ ಮಜ್ಜಾಯಾಂ ಸರ್ಪಿಸಾಗರಃ| ತಸ್ಮಾದಿಕ್ಷುರಸಾಂತೇ ಚ ಶ್ರೂಣಿತೇ ಮಧುರಿತ್ಯುಪಿ| ಸ್ವಾದೋದಕಲಂಬಕಸ್ಥಾನೇ ಗರ್ಭೋದಂ ಸಪ್ತಸಾಗರೇ || ನಾದಚಕ್ರೇಸ್ಥಿತೋ ಸೂರ್ಯಂ ಬಿಂದು ಚಕ್ರೇ ಚ ಚಂದ್ರಮಾಃ! ಲೋಚನಾಭ್ಯಾಂ ಕುಂಜೋ ಜ್ಞೇಯೇ ಹೃದಯೇ ಚ ಬುಧಃ ಸ್ಕೃತಃ|| ಎಂದುದಾಗಿ, ಇಂತೀ ಈರೇಳುಲೋಕ ಒಳಗಾದ ಚರಾಚರವನೊಳಕೊಂಡ ಪರಿಪೂರ್ಣಬೋಧ ತಾನೆ, ನಮ್ಮ ಪರಮಗುರು ನಂಜುಂಡಶಿವನು. ||